" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Monday, July 9, 2012

ಬೆಂದಕಾಳೂರಿನ ಭೊಂಬಾಟ್ ಕೋಟೆ

ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅವದಿಯಲ್ಲಿ ಬೆಂಗಳೂರಿನ ಹೃದಯ ಬಾಗದಲ್ಲಿ ಮಣ್ಣಿನ ಕೋಟೆಯನ್ನು ನಿರ್ಮಿಸಿದರು, ಕ್ರಿ.ಶ. ೧೭೬೧ರಲ್ಲಿ ಹೈದರ್-ಅಲಿ ಇದರ ಜೀರ್ಣೋದ್ಧಾರ ಮಾಡಿ ಕಲ್ಲಿನ ಕೋಟೆಯನ್ನಾಗಿ ಪರಿವರ್ತಿಸಿದರು.



ಬ್ರಿಟೀಷ್-ಈಸ್ಟ್-ಇಂಡಿಯ-ಕಂಪನಿಯ ಪ್ರತಿನಿಧಿಯಾದ ಲಾರ್ಡ್-ಕಾರ್ನ್-ವಾಲೀಸ್, ೨೧-ಮಾರ್ಚ್-೧೭೯೧ರಂದು ಟಿಪ್ಪು ಸುಲ್ತಾನನಿಂದ ವಶಕ್ಕೆ ಪಡೆಯುತ್ತಾನೆ, ಅದು ಮೂರನೇ ಮೈಸೂರು ಯುದ್ದದ ಸಮಯ (೧೭೯೦-೧೭೯೨).



ಈಗ ಈ ಕೋಟೆಯೂ ಸಂಪೂರ್ಣವಾಗಿ ನಾಶವಾಗಿದ್ದು ದೆಹಲಿಯ ಹೆಬ್ಬಾಗಿಲು ಮಾತ್ರ ಉಳಿದಿದೆ.



ಬೆಂದಕಾಳೂರಿನ ಭೊಂಬಾಟ್ ಕೋಟೆ ಈಗ ಬರಿ ನೆನಪು. ಆ ನೆನಪಿನ ಚಿತ್ರಗಳು ಮುಂದಿನ ಜನಾಂಗಕ್ಕೆ ಕೇವಲ ಕಥೆಗಳಾಗದಿರಲಿ. ಅದಕ್ಕಾಗಿಯೆ ನಮ್ಮ ಹೆಮ್ಮೆಯ ಕರುನಾಡ ಸ್ಮಾರಕಗಳನ್ನು ರಕ್ಷಿಸುವ ಹೋಣೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ನಮ್ಮ ನಮ್ಮ ಊರು-ಕೇರಿಗಳಲ್ಲಿ ಈ ಕೆಲಸ ಪ್ರಾರಂಭವಾಗಬೇಕು.




ಕೆಂಪೇಗೌಡರ ಕನಸಿನ ಕೋಟೆಯನ್ನ ಒಮ್ಮೆ ಸುತ್ತು ಹಾಕಿ ಬರೊಣ.

೧) ಬೆಂಗಳೂರು ಕೋಟೆಯ ಹೆಬ್ಬಾಗಿಲು
 


೨) ಬೆಂಗಳೂರು ಕೋಟೆಯ ದೆಹಲಿ ಹೆಬ್ಬಾಗಿಲು



೩) ಕ್ರಿ.ಶ. ೧೮೬೦ ರಲ್ಲಿ ನಿಕೊಲಸ್-ಬ್ರೋಸ್ ಎನ್ನುವ ಬ್ರಿಟೀಷ್ ವ್ಯೆಕ್ತಿ (ಭಾವ ಚಿತ್ರ) ಕಂಡ ಬೆಂಗಳೂರು ಕೋಟೆ.



೪) ಬೆಂಗಳೂರು ಕೋಟೆಯ ಈಗಿನ ಒಳಾಂಗಣ


೫) ಬೆಂಗಳೂರು ಕೋಟೆಯಲ್ಲಿನ ಗಣಪತಿ ದೇವಾಲಯ



೬) ಬೆಂಗಳೂರು ಕೋಟೆಯ ದೆಹಲಿ ಹೆಬ್ಬಾಗಿಲು (ಈಗಿನ ಚಿತ್ರಣ)






ಹೆಚ್ಛಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

http://en.wikipedia.org/wiki/Bangalore_Fort



 






Sunday, February 19, 2012

ಪ್ರಚಲಿತ ಘಟನೆಗಳಲ್ಲಿ ಮಾಸ್ಟರ್ ಆಗುವುದು ಹೇಗೆ ?

ಆತ್ಮೀಯ ಗೆಳೆಯರೇ ,

ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಪ್ರತಿ ಸ್ಪರ್ಧಾರ್ತಿ ಯು ಪ್ರಚಲಿತ ಘಟನೆಗಳ ಬಗ್ಗೆ ಪ್ರತಿ ಕ್ಷಣ ಬಗೆಹರಿಸಬೇಕು. ಯಾಕೆಂದರೆ ಅವು ನಿಂತ ನೀರಲ್ಲ. ಪ್ರತಿ ಕ್ಷಣ, ದಿನ ಅವು ಬದಲಾಗುತ್ತಿರುತ್ತವೆ. ಹಾಗಾಗಿಯೇ ಈ ವಿಷಯದ ಬಗ್ಗೆ ಸದಾ ಹೊಸ ಅಪ್ಡೇಟ್ ಗಳನ್ನ ಮಾಡಿಕೊಳ್ಳಬೇಕು. ಪ್ರಚಲಿತ ಘಟನೆಗಳು ಹಲವು ವಿಷಯಗಳಿಗೆ ಸಂಬಂದಿಸಿರುತ್ತವೆ. ರಾಷ್ಟ್ರೀಯ, ಅಂತರಾಷ್ಟ್ರೀಯ , ಕ್ರೀಡೆ, ಸಿನೆಮ, ಸಾಹಿತ್ಯ, ರಾಜ್ಯ, ರಾಜಕೀಯ, ಪ್ರಶಸ್ತಿ-ಪುರಸ್ಕಾರಗಳು,ಸುದ್ದಿಯಲ್ಲಿರುವ ವ್ಯಕ್ತಿಗಳು -ಸಂಸ್ಥೆಗಳು , ಅಂತರಾಷ್ಟ್ರೀಯ ಸಂಸ್ಥೆಗಳು, ಹೀಗೆ ಪ್ರಚಲಿತ ಘಟನೆಗಳು ಹಲವು ಆಯಾಮಗಳಿಗೆ ಸಂಬಂದಿಸಿವೆ. ಇವೆಲ್ಲವನ್ನೂ ಪ್ರತ್ಯೇಕ ವಿಭಾಗಗಳನ್ನಾಗಿ ಮಾಡಿಕೊಂಡು ಅಭ್ಯಸಿಸಬೇಕು. ಅಲ್ಲದೆ ಆ ವಿಷಯಗಳಿಗೆ ಸಂಬಂದಿಸಿದ ನೂತನ ಮಾಹಿತಿಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಹೀಗೆ ಪ್ರತಿ ನಿತ್ಯ ಮಾಡುತ್ತಾ ಹೋದರೆ ನೀವು ಪ್ರಚಲಿತ ಘಟನೆಗಳಲ್ಲಿ ಮಾಸ್ಟರ್ ಆಗುವುದರಲ್ಲಿ ಸಂದೇಹವೇ ಇಲ್ಲ. ಅಲ್ಲದೆ ಕೇವಲ ಪರೀಕ್ಷಾ ದೃಷ್ಟಿ ಯಿಂದಲ್ಲದೆ, ಸಾಮಾನ್ಯವಾಗಿ ಇತರರಿಗಿಂತ ನಿಮ್ಮ ಜ್ಞಾನ ಮಟ್ಟ ವೃದ್ದಿ ಯಾಗುತ್ತದೆ.

ಉದಾಹರಣೆ : ಮೆಮೊಗೆಟ್ ಹಗರಣ

  • ಈ ಹಗರಣ ಪಾಕಿಸ್ತಾನದಲ್ಲಿ ನಡೆಯಿತು.
  • ಮುಖ್ಯ ವ್ಯಕ್ತಿ : ಮನ್ಸೂರ್ ಈಜಾಜ್.
  • ಮನ್ಸೂರ್ ಈಜಾಜ್ ಪಾಕ್ ಮೂಲದ ಅಮೇರಿಕ ಉದ್ಯಮಿ.
  • "ಪಾಕ್ ನಲ್ಲಿ ಸೇನಾ ಬಂಡಾಯ ನಡೆದರೆ ಅಮೇರಿಕ ಸಹಾಯ ಮಾಡಬೇಕು " ಎಂಬ ವಿಷಯವಿರುವ ಪತ್ರದ ಮಾಹಿತಿಯನ್ನು ಈತ ಲೀಕ್ ಮಾಡಿದ ಇದೆ ಮೆಮೊಗೆಟ್ ಹಗರಣ.
ಇನ್ನು ಈ ವಿಷಯಕ್ಕೆ ಸಂಬಂದಿಸಿದನೆ ಹಲವು ಪೂರಕ ಮಾಹಿತಿಗಳನ್ನು ಸಂಗ್ರಹಿಸಬಹುದು. ಅದನ್ನು ಈ ಕೆಳಕಂಡಂತೆ ಹೆಸರಿಸಬಹುದು.
  1. ಕೂಪ್ ಅಂದರೇನು ? ಮಿಲಿಟರಿ ಬಂಡಾಯವನ್ನು ಕೂಪ್ ಅಂತ ಕರಿತಾರೆ.ಅರ್ಥ ಸೇನಾಕ್ರಾಂತಿ .
  2. ಅಮೆರಿಕಾದ ವಿದೇಶಾಂಗ ಮಂತ್ರಿಯನ್ನು ಏನೆಂದು ಕರೆಯುತ್ತಾರೆ. ? ಸೆಕ್ರೆಟರಿ ಆಪ್ ಸ್ಟೇಟ್
  3. ಅಮೆರಿಕಾದ ವಿದೇಶಾಂಗ ಮಂತ್ರಿ ಯಾರು ? ಹಿಲರಿ ಕ್ಲಿಂಟನ್
  4. ಪಾಕ್ ಸೇನಾ ಮುಖ್ಯಸ್ಥ ಯಾರು? ಜ// ಆಶ್ ಪ್ಹಾಕ್ ಕಯಾನಿ
  5. ಪಾಕ್ ಬೇಹುಗಾರಿಕ ಸಂಸ್ಥೆ ಯಾವುದು? ಐ .ಎಸ್.ಐ.
  6. ISI ನ ಮುಖ್ಯಸ್ಥ ಯಾರು? ಸೈಯದ್ ಅಹಮದ್ ಶೂಜ್ ಪಾಷಾ
  7. ಪಾಕ್ ನ ಪ್ರಧಾನಿ ಯಾರು ? ಯೂಸುಪ್ಹ್ ಗಿಲಾನಿ.
  8. ಪಾಕ್ ನ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಯಾರು ? ನ್ಯಾ//ಇಪ್ತಿಕಾರ್ ಚೌಧರಿ .
  9. ನ್ಯೂಕ್ ಎಂದರೇನು ? ನ್ಯೂಕ್ಲಿಯರ್ ವೆಪನ್ಸ್
  10. ಪಾಕ್ ನಲ್ಲಿ ಎಷ್ಟು ಅಣುಸ್ಥಾವರ ಗಳಿವೆ ? ಒಂದು
  11. ಪಾಕ್ ಅಣು ಸ್ಥಾವರದ ಹೆಸರೇನು ? ಕಹೂತ (ಸಿಂಧ್ ಪ್ರಾಂತ್ಯ ದಲ್ಲಿದೆ)
  12. ಇತಿಹಾಸದಲ್ಲಿ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ದಿಗ್ಬಂಧನ ಎದುರಿಸುತ್ತಿರುವ ಪಾಕ ನ ವಿವಾದಾತ್ಮಖ ಅಣು ವಿಜ್ಞಾನಿ ಯಾರು ?ಡಾ/ಅಬ್ದುಲ್ ಖಾದಿರ್ ಖಾನ್
  13. ಡಾ/ಅಬ್ದುಲ್ ಖಾದಿರ್ ಖಾನ್ ಮೇಲಿನ ಆರೋಪ ಏನು ? ನ್ಯೂಕ್ಲಿಯರ್ ವೆಪನ್ ತಂತ್ರಜ್ಞಾನವನ್ನು ಇರಾನ್ ದೇಶಕ್ಕೆ ಹೇಳಿಕೊಟ್ಟಿದ್ದಾರೆ.
  14. IAEA ವಿಸ್ತರಿಸಿ ? International Automic Energy Agency .
  15. IAEA ದ ಕೇಂದ್ರ ಕಚೇರಿ ಎಲ್ಲಿದೆ ? ವಿಯೆನ್ನಾ
  16. ವಿಯೆನ್ನಾ ಯಾವ ದೇಶದ ರಾಜಧಾನಿ ? ಆಸ್ಟ್ರಿಯ
  17. IAEA ದ ಅದ್ಯಕ್ಷರಾಗಿದ್ದ ಇರಾನ್ ನ ಅದ್ಯಕ್ಷರು ಯಾರು ?ಮಹಮದ್ ದಿನೇಜಾದಿ .
  18. ಭಾರತದಲ್ಲಿ ಎಸ್ಟು ಅಣು ಸ್ಥಾವರಗಳಿವೆ ? 22
  19. ಕರ್ನಾಟಕದಲ್ಲಿ ಎಸ್ಟು ಅಣು ಸ್ಥಾವರಗಳಿವೆ ? 01 ಕೈಗಾ
  20. ಕ್ಯಾಪ್ಸ್ (CAPS)ವಿಸ್ತರಿಸಿ ? KAIGA AUTOMIC POWER STATION .

ಹೀಗೆ ಒಂದು ವಿಷಯಕ್ಕೆ ಸಂಬಂದಿಸಿದ ಪೂರಕ ವಿಷಯಗಳನ್ನು ಲಿಂಕಿಸುತ್ತಾ ಹೋದರೆ ಆದೆ ಸಮಗ್ರ ಜ್ಞಾನ ಕೋಶವಾಗುತ್ತದೆ.
ನೀವು ಇದೆ ರೀತಿ ಮಾಡಿ ನಿಮ್ಮ ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಳ್ಳಿ. wish you good luck.

Wednesday, February 15, 2012

ನೋಟ್ಸ್ /ಟಿಪ್ಪಣಿ ಮಾಡೋದು ಹೇಗೆ ?


ನೋಟ್ಸ್ /ಟಿಪ್ಪಣಿ ಮಾಡೋದು ಹೇಗೆ ?

ಡಿಯರ್ ಪ್ರೆಂಡ್ಸ್ , ಸ್ಪರ್ಧಾ ಲೋಕದಲ್ಲಿ ಪ್ರತಿಯೊಂದು ವಸ್ತು ವಿಷಯ ವನ್ನು ಸ್ಪರ್ದೆಯಿಂದಲೇ ನೋಡಬೇಕು. ಅದಕ್ಕಾಗಿಯೇ ನೀವು ಅಚ್ಚುಕಟ್ಟಾಗಿ , ಸಮಗ್ರಪೂರ್ಣ ಮಾಹಿತಿಯನ್ನು ಸಂಕ್ಷಿಪ್ತವಾಗಿ, ಪುನರಾವರ್ತಿಸಲು ಸಹಾಯಕವಾಗುವಂತೆ ,ನಿಮ್ಮದೇ ಆದ ಸ್ವಂತ ನೋಟ್ಸ್ ಅಥವಾ ಟಿಪ್ಪಣಿ ಮಾಡಬೇಕು. ಮಾರುಕಟ್ಟೆಯಲ್ಲಿ ವಿವಿಧ ಪರೀಕ್ಷೆಗಳಿಗೆ ಸಂಬಂದಿಸಿದಂತೆ ಹಲವಾರು ಪುಸ್ತಕಗಳು, ಮ್ಯಾಗಜಿನ್ ಗಳು, ಪತ್ರಿಕೆಗಳು, ಸಿದ್ದ ನೋಟ್ಸ್ ಗಳು ದೊರೆಯುತ್ತವೆ. ಅವೆಲ್ಲವನ್ನು ಅದ್ಯಯನ ,ಮಂಥನ ಮಾಡಬೇಕು ನಿಜ. ಆದರೆ ಅವನ್ನೇ ಅಲ್ಟಿಮೇಟ್ ಸಾಮಾಗ್ರಿಗಳನ್ನಾಗಿಸಿ ಕೊಳ್ಳಬಾರದು. ಅದಕ್ಕಾಗಿಯೇ ನಿಮ್ಮದೇ ಆದ ನೋಟ್ಸ್/ಟಿಪ್ಪಣಿ ಮಾಡಿಕೊಳ್ಳಬೇಕು. ಅದು ನಿಮಗೆ ಪರೀಕ್ಷಾ ಸಮಯದಲ್ಲಿ ಬಹಳ ಉಪಯುಕ್ತವಾಗುತ್ತದೆ. ಅದಕ್ಕೆ ಸಂಬಂದಿಸಿದಂತೆ ಕೆಲವು ಅಂಶಗಳನ್ನ ನಿಮ್ಮ ಮುಂದಿಡಲು ಬಯಸುತ್ತೇನೆ.

೦೧>

ಒಂದು ವಿಷಯದ ಬಗೆಗೆ ಸಿಗುವ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ. ಕೊನೆಗೆ ಆ ಎಲ್ಲಾ ಮಾಹಿತಿಗಳನ್ನು ಒಗ್ಗೂಡಿಸಿ ನಿಮ್ಮದೇ ರೀತಿಯಲ್ಲಿ ಒಂದು ಕಡೆ ಬರೆದಿಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಅದಕ್ಕೆ ಪೂರಕ ಮಾಹಿತಿ ಸಿಕ್ಕರೆ ಅದಕ್ಕೆ ಸೇರಿಸುತ್ತಾ ಹೋಗಿ. ಹಾಗಾಗಿ ಒಂದು ವಿಷಯದ ಸಂಪೂರ್ಣ ಮಾಹಿತಿ ಒಂದು ಕಡೆ ಸಿಗುವಂತಾಗುತ್ತದೆ.

೦೨>

ಬೇರೆ ಬೇರೆ ವಿಷಯಗಳಿಗೆ ಸಂಬಂದಿಸಿದ ಮಾಹಿತಿಗಳನ್ನು ಬೇರೆ ,ಬೇರೆ ಪುಸ್ತಕ ಅಥವಾ ಪ್ರತ್ಯೇಕ ಹಾಳೆಗಳಲ್ಲಿ ಬರೆದಿಟ್ಟುಕೊಳ್ಳಿ. ಇಲ್ಲಾ ವಿಷಯಗಳನ್ನು ಒಂದೇ ಕಡೆ ಸಂಗ್ರಹಿಸುತ್ತಾ ಹೋದರೆ ಗೊಂದಲ ಉಂಟಾಗುತ್ತದೆ.
ಉದಾಹರಣೆ: ಇತಿಹಾಸಕ್ಕೆ ಸಂಬಂದಿಸಿದ ಮಾಹಿತಿ ಅಂದುಕೊಂಡರೆ ಅದನ್ನು ಪ್ರತ್ಯೇಕ ಭಾಗಗಳನ್ನಾಗಿ ಮಾಡಿಕೊಳ್ಳಬೇಕು.
ವಿಶ್ವ ಇತಿಹಾಸ ,ಭಾರತದ ಇತಿಹಾಸ, ಕರ್ನಾಟಕದ ಇತಿಹಾಸ. ಭಾರತದ ಇತಿಹಾಸ ತೆಗೆದುಕೊಂಡರೆ, ಪ್ರಾಚೀನ ಇತಿಹಾಸ, ಮಧ್ಯಯುಗದ ಇತಿಹಾಸ, ಆಧುನಿಕ ಭಾರತದ ಇತಿಹಾಸ, ಸ್ವಾತಂತ್ರ ಸಂಗ್ರಾಮ ಹೀಗೆ.

೦೩>

ದಯವಿಟ್ಟು ನಕಲು /ಕ್ಸೆರಾಕ್ಸ್ ಸಂಸ್ಕೃತಿ ಗೆ ಮೊರೆ ಹೋಗಬೇಡಿ. ಬೇರೆ ಬೇರೆ ಕೋಚಿಂಗ್ ಸೆಂಟರ್ಗಳ ನೋಟ್ಸು , ಇಂಪಾರ್ಟೆಂಟ್ ನೋಟ್ಸ್ ಹಂಗೆ ಹಿಂಗೆ ಅನ್ಕೊಂಡು ಬರಿ ಕ್ಸೆರಾಕ್ಸ್ ಪ್ರತಿಗಳನ್ನು ನಿಮ್ಮ ಕಪಾಟಿನಲ್ಲಿ ಜೋಡಿಸುತ್ತಾ ಹೋಗಬೇಡಿ. ಮೊದಲೇ ಹೇಳಿದಂತೆ ಎಲ್ಲವನ್ನು ಓದಿ, ಆದರೆ ನಿಮ್ಮದೇ ಕೈ ಬರವಣಿಗೆಯ ಅಲ್ಟಿಮೇಟ್ ನೋಟ್ಸ್ ಮಾಡಿಕೊಳ್ಳಿ .

೦೪>

ಎಂತಹ ಉತ್ಕ್ರುಸ್ಟ ಮಟ್ಟದ ಮಾಹಿತಿ /ನೋಟ್ಸ್ ನಿಮಲ್ಲಿದ್ದರು ಕೂಡ ಅದನ್ನ ನಿಮಗನಿಸಿದ ರೀತಿಯಲ್ಲಿ ಬರೆದುಕೊಳ್ಳಿ. ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ನಿಮಗೆ ತಿಳಿದಿರುವ ಹಾಗೆ ನಿಗದಿತ ಸಾಲುಗಳಲ್ಲಿ ಕೆಲವು ಪ್ರಶ್ನೆ ಗಳಿಗೆ ಉತ್ತರಿಸಬೇಕಾಗುತ್ತದೆ. ಹಾಗಾಗಿ ಕೈನಲ್ಲಿ ಬರೆದು ಅಬ್ಯಾಸಿಸಿಕೊಳ್ಳಿ ಮತ್ತು ಇದು ನಿಮಗೆ ಹೆಚ್ಚು ನೆನಪು ಕೂಡ ಇರುತ್ತದೆ.

೦೫>

ನೋಟ್ಸ್ ಮಾಡುವಾಗ ಒಂದೇ ರೀತಿಯ ಶಾಯಿ/ಇನ್ಕ್ ನ್ನು ಬಳಸಬೇಡಿ. ಬೇರೆ ಬೇರೆ ಬಣ್ಣದ ಪೆನ್ನುಗಳನ್ನು ಬಳಸಿ. ಹೆಡ್ಡಿಂಗ್, ಸಬ್ ಹೆಡ್ಡಿಂಗ್, ಮುಖ್ಯವಾದ ಸ್ಥಳ , ವ್ಯಕ್ತಿ, ದಿನಾಂಕ, ಸಾಲುಗಳನ್ನು ಬೇರೆ ಬೇರೆ ಬಣ್ಣಗಳಲ್ಲಿ ಬರೆದುಕೊಂಡರೆ ಅದ್ಯಯನ ಮಾಡುವಾಗ ಬಹು ಬೇಗ ಅವನ್ನ ಗುರುತಿಸಬಹುದು. ಪುನರಾವರ್ತನೆಯ ಸಮಯದಲ್ಲಿ ಇದು ಹೆಚ್ಚು ಉಪಯುಕ್ತವಾಗುತ್ತದೆ.

೦೬>

ಪುಸ್ತಕಗಳಲ್ಲಿ ನೋಟ್ಸ್ ಮಾಡುವುದಕ್ಕಿಂದ ಉತ್ತಮ ಗುಣಮಟ್ಟದ ಹಾಳೆಗಳಲ್ಲಿ ನೋಟ್ಸ್ ಮಾಡುತ್ತಾ ಹೋದರೆ, ಪೂರಕ ಮಾಹಿತಿ ಸಿಕ್ಕಾಗ ಅದಕ್ಕೆ ಸೇರಿಸುತ್ತಾ ಹೋಗಬಹುದು.

೦೭>

ನೋಟ್ಸ್ ಓದುವಾಗ ನಿಮ್ಮ ಬಳಿ ಸದಾ ಬುಕ್ ಮಾರ್ಕರ್ ಗಳಿರಲಿ , ಮುಖ್ಯವಾದ ಮಾಹಿತಿಗಳನ್ನು ಮಾರ್ಕ್ ಮಾಡುತ್ತಾ ಹೋಗಿ.

೦೮>

ಒಂದು ಸ್ವಾರ್ಥದ ವಿಷಯ. ದಯವಿಟ್ಟು ನೀವು ಮಾಡಿಟ್ಟು ಕೊಂಡ ನೋಟ್ಸ್ ನ್ನು ಯಾರಿಗೂ ಕೊಡಬೇಡಿ. ಸ್ವಾರ್ಥಿಗಳಾಗಿ ಅನ್ನುವುದು ನಮ್ಮ ಉದ್ದೇಶ ಅಲ್ಲ. ಅದು ನಿಮ್ಮ ಶ್ರಮದ ಪ್ರತಿಫಲ. ಪುಕ್ಕಟ್ಟೆ ಯಾಗಿ ಬೇರೆಯವರಿಗೆ ಸಿಗುವುದು ಬೇಡ. ಅವರೂ ಶ್ರಮವಹಿಸಿ ಸಿದ್ದಮಾಡಿ ಕೊಳ್ಳಲಿ . ಬೇಕಾದರೆ ಪುಸ್ತಕಗಳೋ, ಮತ್ತಿನ್ನೆನಾದರು ಕೊಡಿ.

ಪ್ರೀತಿಯ ಬಂದುಗಳೇ ನಾವು ಹೇಗೇ ಬಟ್ಟೆಯ ಕಪಾಟಿನಲ್ಲಿ ನಮಗಿಸ್ಟವಾದ ಬಟ್ಟೆ ಗಳನ್ನೂ ಆಯ್ದು ಧರಿಸಿಕೊಳ್ಳುತ್ತೇವೆಯೋ ಹಾಗೆಯೇ ಅಗಾಧವಾದ ಮಾಹಿತಿ ಲೋಕದಲ್ಲಿ, ಅಗತ್ಯವಾದ, ಪ್ರಾಮುಖ್ಯವಾದ ಮಾಹಿತಿಗಳನ್ನು ಮಾತ್ರ ನಿಮ್ಮ ನೋಟ್ಸ್ ನಲ್ಲಿ ಬರೆದಿಟ್ಟುಕೊಳ್ಳಬೇಕು. ಆ ನೋಟ್ಸ್ ನಿಜಕ್ಕೂ ನಿಮ್ಮ ಸಾಧನೆಗೆ ಕೀಲಿಕೈ. ಮತ್ತೇಕೆ ತಡ ಇಂದಿನಿಂದಲೇ ಬರೆಯಲು ಪ್ರಾರಂಭಿಸಿ. ಯಶಸ್ಸಿನೆಡೆಗೆ ಸಾಗಿ . ವಿಶ್ ಯು ಗುಡ್ ಲುಕ್.

ನಿಮಗೆ ಗೊತ್ತಿರುವ ವಿಷಯಗಳನ್ನು, ಮಾಹಿತಿಗಳನ್ನು ನಮಗೆ ಕಳುಹಿಸಿ. ಜ್ಞಾನವನ್ನು ಪಸರಿಸೋಣ. ಸಮೃದ್ದಕರ್ನಾಟಕ ಕಟ್ಟೋಣ. ಇದರಲ್ಲಿ ನಮ್ಮ ಸ್ವಾರ್ಥ ಇಲ್ಲ. ಗ್ರಾಮೀಣ ಕನ್ನಡ ಸ್ಪರ್ಧಾರ್ತಿ ಗಳಿಗಾಗಿ ವೇದಿಕೆ ಸೃಷ್ಟಿಯಾಗಿದೆ . ಇದರಲ್ಲಿ ಪ್ರಕಟಿಸುವ ಮಾಹಿತಿಗಳನ್ನು ಯಾರು ಬೇಕಾದರೂ ಬಳಸಿಕೊಂಡು ನಿಮ್ಮ ಜ್ಞಾನ ಮಟ್ಟವನ್ನು ವೃದ್ಡಿಸಿಕೊಳ್ಳ ಬಹುದು. ಇದಕ್ಕೆ ಸಂಬಂದಿಸಿದಂತೆ ಈ ಮಾಹಿತಿಗಳನ್ನು ಬಳಸಿಕೊಳ್ಳಲು ಈ ಬ್ಲಾಗ್ ನಲ್ಲಿ ಯಾವುದೇ ನಿರ್ಭಂದ ವಿಧಿಸಿಲ್ಲ . ದಯವಿಟ್ಟು ಈ ಕನ್ನಡ ಬ್ಲಾಗ್ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೆ ತಿಳಿಸಿ. ನಿಮ್ಮ ಸಕಾರಾತ್ಮಕ ಪಾಲ್ಗೊಳ್ಳುವಿಕೆ ನಮಗೆ ಅತಿ ಮುಖ್ಯ .


ಶುಭ ಆಶಯಗಳೊಂದಿಗೆ ನಿಮ್ಮೊಲ್ಲೊಬ್ಬ ,

ಚುಕ್ಕಿ ಹುಣಸೂರು.
ಬಿಂದುವಿನಿಂದ ಅನಂತದೆಡೆಗೆ...