" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Monday, February 2, 2015

ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಸ್ಥಳಗಳು

ಆತ್ಮೀಯ ಸ್ಪರ್ದಾರ್ಥಿಗಳೇ ,

"ದೇಶ ಸುತ್ತಿ ನೋಡು , ಕೋಶ ಓದಿ ನೋಡು " ಎಂಬ  ಮಾತು ಬಹಳ ಜನಜನಿತವಾಗಿದೆ .  ಅದೇ ರೀತಿ   ಸ್ಪರ್ದಾರ್ತಿ ಗಳಾಗಿ, ಜ್ನಾನಾರ್ಥಿ ಗಳಾಗಿ, ಒಬ್ಬ ನಾಗರಿಕರಾಗಿ  ಕೆಲವು ಸ್ಥಳಗಳ ಮಾಹಿತಿ ನಮಗೆ ಇರಬೇಕಾಗುತ್ತದೆ . ಅದರಲ್ಲೂ ಐತಿಹಾಸಿಕ  ಪ್ರಾಮುಖ್ಯತೆಯುಳ್ಳ ಸ್ಥಳಗಳ ಅರಿವು ಮುಖ್ಯ . ಆ ಸ್ಥಳಗಳ ಹಿಂದೆ ದೊಡ್ಡ ಮಾಹಿತಿ ಗಳು   ಅಡಗಿರುತ್ತವೆ .  ಅವುಗಳನ್ನು  ಕಲಿಕೆಯ ಮೂಲಕ ಅರಿಯುವ ಪ್ರಯತ್ನ ಮಾಡೋಣ .

೦೧. ಬೆಳಗಾವಿ :


  1. ೧೯೨೪ ರಲ್ಲಿ ಅಖಿಲ ಭಾರತ ಕಾಂಗ್ರೆಸ್ಸ್  ಸಮಾವೇಶ  ಇಲ್ಲಿ ನಡೆಯಿತು . 
  2. ಮಹಾತ್ಮ ಗಾಂಧೀಜಿ  ಅಧ್ಯಕ್ಷತೆ  ವಹಿಸಿದ್ದರು . 
  3. ಈ ಸಮಾವೇಶದಲ್ಲಿ " ಉದಯವಾಗಲಿ ಚೆಲುವ ಕನ್ನಡ ನಾಡು " ಹಾಡನ್ನು ಮೊದಲ ಭಾರಿಗೆ ಹಾಡಲಾಯಿತು . 
  4. ಈ ಗೀತೆಯನ್ನು ಬರೆದವರು " ಹುಯಿಲುಗೋಳ ನಾರಾಯಣರಾಯರು ".
  5. ಇಲ್ಲಿಯೇ " ಕರ್ನಾಟಕ ಏಕೀಕರಣ  ಸಮಾವೇಶವು " ನಡೆಯಿತು . 
  6. ಇದರ ಅಧ್ಯಕ್ಷತೆ ವಹಿಸಿದ್ದವರು " ಕಡಪ ರಾಘವೇಂದ್ರ ರಾಯರು ". 

ಹೀಗೆ ಒಂದು ಸ್ಥಳದೊಟ್ಟಿಗೆ ಹಲವಾರು ಸಾಮಾನ್ಯ ಜ್ಞಾನ ದ ಅಂಶಗಳು ತಳುಕು ಹಾಕಿಕೊಂಡಿರುತ್ತವೆ . ಇತಿಹಾಸದ ದೃಷ್ಟಿ ಯಿಂದ ಮಾತ್ರ ಈ ಸ್ಥಳದ ಬಗ್ಗೆ ತಿಳಿದಿದ್ದೆವೆ . ಇನ್ನು ಅಲ್ಲಿನ ವಿಶೇಷತೆಗಳು , ಅಲ್ಲಿರುವ ವಿಶೇಷ ವ್ಯಕ್ತಿ ಗಳು, ಸ್ಥಳಗಳು , ಘಟನೆಗಳು  ಇವೆಲ್ಲವುದರ ಬಗ್ಗೆಯೂ ತಿಳಿದುಕೊಂಡು ಟಿಪ್ಪಣಿ  ಮಾಡಿಕೊಂಡರೆ  ಸಂಪೂರ್ಣ ಚಿತ್ರಣ ಸಿಕ್ಕ ಹಾಗಾಗುತ್ತದೆ . 

Sunday, February 1, 2015

ಕನ್ನಡ ಭಾಷೆ

೦೧. "ಕಾವೇರಿಯಿಂದ ಆ ಗೋದಾವರಿಯ ವರಮಿರ್ಪ ನಾಡಲು ಕನ್ನಡದೊಳ್ ಭಾವಿಸಿದ ಜನಪದಂ " ಈ ಉಕ್ತಿ ಯನ್ನು "ಕವಿರಾಜ ಮಾರ್ಗ " ಕೃತಿ  ಕಾಣಬಹುದು - ಬರೆದವರು :ಅಮೋಘವರ್ಷ ನೃಪತುಂಗ  - ಈತ ರಾಷ್ಟ್ರಕೂಟ ರ ದೊರೆ - ೦೯ ನೇ ಶತಮಾನದಲ್ಲಿ ಆಳ್ವಿಕೆ 

೦೨. ಸೋಮದೇವ ಬರೆದದ್ದು "ಕಥಾ ಸರಿತ್ಸಾಗರ " - ವೈಶಾಜಿ  ಬರೆದದ್ದು "ಬೃಹತ್ ಕಥಾ "  -  ಈ ಕೃತಿ ಗಳಲ್ಲಿ " ಕರ್ನಾಟಕ ಎಂಬ ಪದದ  ಬಳಕೆ ಇದೆ ,

೦೩. " ಸಾಧುಂಗೆ  ಸಾಧು , ಮಾಧುರ್ಯಂಗೆ ಮಾದುರ್ಯಂ  ಭಾದಿಪ್ಪ ಕಾಲಿಗೆ ವಿಪರೇತನಲ್ತೆ  ಕರ್ನಾಟಕಂ " ಈ ಉಕ್ತಿ ಇರುವುದು ಕಪ್ಪೆ ಆರ್ಯಭಟನ ಶಾಸನದಲ್ಲಿ . 
೦೪. ಹರ್ಮನ್ ಫ್ರೆಡ್ರಿಕ್ ಮೋಗ್ಲಿಂಗ್ - ಜರ್ಮನಿ ದೇಶದವನು -" ಮಂಗಳೂರು ಸಮಾಚಾರ"  ಪತ್ರಿಕೆ ಪ್ರಾರಂಭಿಸಿದ - ಇದು  ಕನ್ನಡದ ಮೊದಲ ಪತ್ರಿಕೆ -   ಈತ ಬಾಸೆಲ್ ಮಿಶನ್ ಸಂಸ್ಥೆಯ ಪ್ರತಿನಿಧಿ  ಭಾರತಕ್ಕೆ ಬಂದ -  ೧೮೪೮ ರಲ್ಲಿ " ಜೈಮಿನಿ ಭಾರತ " ಪ್ರಕಟಣೆ . 

೦೫ " A GRAMMAR OF KANNADA LANGUAGE "    ಈ  ಕೃತಿಯ  ಲೇಖಕ  ವಿಲಿಯಂ ಕೇರಿ  -  ಇದು ಆಧುನಿಕ ಕನ್ನಡದ ಮೊದಲ ಕೃತಿ - ೧೮೧೭  ರಲ್ಲಿ   ಕಲ್ಕತ್ತಾ ಬಳಿ   ಸಹರಾನ್ ಪುರ ಮುದ್ರಣಾಲಯ ದಲ್ಲಿ ಆಚ್ಚು ಹಾಕಿಸಲಾಯಿತು . 

೦೬.  "ದಿ ಡಿಕ್ಷನರಿ " ಕೃತಿ ಬರೆದವರು  ರೆವರೆಂಡ್ ಕಿಟಲ್ - ೧೮೯೪ ರಲ್ಲಿ . 


Friday, January 23, 2015

ವಾಟ್ಸ್ ಆಫ್ ನಲ್ಲಿ " ಕನ್ನಡ ಸ್ಪರ್ಧಾ ಯೋಧರ " ಖಾತೆ , KPSC NOTIFICATION

 ಡಿಯರ್ ಪ್ರೆಂಡ್ಸ್ ನಮಸ್ತೆ, ಅಂತು ಇಂತೂ  KPSC ಗೆ ಗೆ ಹಿಡಿದಿದ್ದ ಗ್ರಹಣ ಬಿಟ್ಟಂತೆ  ಕಾಣುತ್ತಿದೆ . ಹಾಗಾಗಿಯೇ  ಅವರು ಗೆಜೆಟೆಡ್ ಹುದ್ದೆಗಳಿಗಾಗಿ NOTIFICATION ಹೊರಡಿಸಿದ್ದಾರೆ . ಹಾಗಾಗಿ ಇಷ್ಟು ದಿನ ನಮ್ಮೊಳಗೆ ಮಲಗಿದ್ದ ಸೈನಿಕನನ್ನು ಜಾಗೃತ ಗೊಳಿಸ ಬೇಕಾಗಿದೆ . ಈ ನಿಟ್ಟಿನಲ್ಲಿ ಚುಕ್ಕಿ ಸಂಸ್ಥೆ ನಿಮ್ಮ ಕನಸುಗಳಿಗೆ ಸ್ಪಂದಿಸಲಿದೆ . ಜ್ನಾನಾಭಿವೃದ್ದಿ ಯನ್ನು ಹಂಚಿಕೊಳ್ಳಲು ವಾಟ್ಸ್ ಅಪ ನಲ್ಲಿ
" ಕನ್ನಡ ಸ್ಪರ್ಧಾ ಯೋಧರ " ಖಾತೆ ತೆರೆದು ಆ ಮೂಲಕ ಮಾಹಿತಿಗಳನ್ನು ಹಂಚಿಕೊಳ್ಳುವ ಹಂಬಲ ನಮ್ಮ ಟೀಮ್ನದ್ದು . ಇದಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ನಿಮ್ಮ ನಂಬರ್ಗಳನ್ನು UPDATE ಮಾಡಿ . ಸಾಧ್ಯವಾದರೆ ಕೆಲವು ಮೀಟಿಂಗ್ ಗಳನ್ನೂ ಆಯೋಜಿಸೋಣ . ಒಟ್ಟಿನಲ್ಲಿ ಎಲ್ಲಾ ಶ್ರಮ ಪಡುವ ಸ್ಪರ್ದಾರ್ತಿ ಗಳಿಗೆ ವಿಜಯ ದೊರಕಬೇಕೆಮ್ಬುದೆ ನಮ್ಮ ಆಶಯ .
ನಲ್ಲಿ
ವಾಟ್ಸ್ ಆಫ್  ನಂಬರ್ 9964438393

ಪ್ರೀತಿಯಿಂದ ನಿಮ್ಮವ
ಲಿಂಗೇಶ್ ಹುಣಸೂರು