" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Sunday, February 1, 2015

ಕನ್ನಡ ಭಾಷೆ

೦೧. "ಕಾವೇರಿಯಿಂದ ಆ ಗೋದಾವರಿಯ ವರಮಿರ್ಪ ನಾಡಲು ಕನ್ನಡದೊಳ್ ಭಾವಿಸಿದ ಜನಪದಂ " ಈ ಉಕ್ತಿ ಯನ್ನು "ಕವಿರಾಜ ಮಾರ್ಗ " ಕೃತಿ  ಕಾಣಬಹುದು - ಬರೆದವರು :ಅಮೋಘವರ್ಷ ನೃಪತುಂಗ  - ಈತ ರಾಷ್ಟ್ರಕೂಟ ರ ದೊರೆ - ೦೯ ನೇ ಶತಮಾನದಲ್ಲಿ ಆಳ್ವಿಕೆ 

೦೨. ಸೋಮದೇವ ಬರೆದದ್ದು "ಕಥಾ ಸರಿತ್ಸಾಗರ " - ವೈಶಾಜಿ  ಬರೆದದ್ದು "ಬೃಹತ್ ಕಥಾ "  -  ಈ ಕೃತಿ ಗಳಲ್ಲಿ " ಕರ್ನಾಟಕ ಎಂಬ ಪದದ  ಬಳಕೆ ಇದೆ ,

೦೩. " ಸಾಧುಂಗೆ  ಸಾಧು , ಮಾಧುರ್ಯಂಗೆ ಮಾದುರ್ಯಂ  ಭಾದಿಪ್ಪ ಕಾಲಿಗೆ ವಿಪರೇತನಲ್ತೆ  ಕರ್ನಾಟಕಂ " ಈ ಉಕ್ತಿ ಇರುವುದು ಕಪ್ಪೆ ಆರ್ಯಭಟನ ಶಾಸನದಲ್ಲಿ . 
೦೪. ಹರ್ಮನ್ ಫ್ರೆಡ್ರಿಕ್ ಮೋಗ್ಲಿಂಗ್ - ಜರ್ಮನಿ ದೇಶದವನು -" ಮಂಗಳೂರು ಸಮಾಚಾರ"  ಪತ್ರಿಕೆ ಪ್ರಾರಂಭಿಸಿದ - ಇದು  ಕನ್ನಡದ ಮೊದಲ ಪತ್ರಿಕೆ -   ಈತ ಬಾಸೆಲ್ ಮಿಶನ್ ಸಂಸ್ಥೆಯ ಪ್ರತಿನಿಧಿ  ಭಾರತಕ್ಕೆ ಬಂದ -  ೧೮೪೮ ರಲ್ಲಿ " ಜೈಮಿನಿ ಭಾರತ " ಪ್ರಕಟಣೆ . 

೦೫ " A GRAMMAR OF KANNADA LANGUAGE "    ಈ  ಕೃತಿಯ  ಲೇಖಕ  ವಿಲಿಯಂ ಕೇರಿ  -  ಇದು ಆಧುನಿಕ ಕನ್ನಡದ ಮೊದಲ ಕೃತಿ - ೧೮೧೭  ರಲ್ಲಿ   ಕಲ್ಕತ್ತಾ ಬಳಿ   ಸಹರಾನ್ ಪುರ ಮುದ್ರಣಾಲಯ ದಲ್ಲಿ ಆಚ್ಚು ಹಾಕಿಸಲಾಯಿತು . 

೦೬.  "ದಿ ಡಿಕ್ಷನರಿ " ಕೃತಿ ಬರೆದವರು  ರೆವರೆಂಡ್ ಕಿಟಲ್ - ೧೮೯೪ ರಲ್ಲಿ . 


No comments:

Post a Comment