" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Showing posts with label ನಮ್ಮ ಕರ್ನಾಟಕ. Show all posts
Showing posts with label ನಮ್ಮ ಕರ್ನಾಟಕ. Show all posts

Sunday, February 1, 2015

ಕನ್ನಡ ಭಾಷೆ

೦೧. "ಕಾವೇರಿಯಿಂದ ಆ ಗೋದಾವರಿಯ ವರಮಿರ್ಪ ನಾಡಲು ಕನ್ನಡದೊಳ್ ಭಾವಿಸಿದ ಜನಪದಂ " ಈ ಉಕ್ತಿ ಯನ್ನು "ಕವಿರಾಜ ಮಾರ್ಗ " ಕೃತಿ  ಕಾಣಬಹುದು - ಬರೆದವರು :ಅಮೋಘವರ್ಷ ನೃಪತುಂಗ  - ಈತ ರಾಷ್ಟ್ರಕೂಟ ರ ದೊರೆ - ೦೯ ನೇ ಶತಮಾನದಲ್ಲಿ ಆಳ್ವಿಕೆ 

೦೨. ಸೋಮದೇವ ಬರೆದದ್ದು "ಕಥಾ ಸರಿತ್ಸಾಗರ " - ವೈಶಾಜಿ  ಬರೆದದ್ದು "ಬೃಹತ್ ಕಥಾ "  -  ಈ ಕೃತಿ ಗಳಲ್ಲಿ " ಕರ್ನಾಟಕ ಎಂಬ ಪದದ  ಬಳಕೆ ಇದೆ ,

೦೩. " ಸಾಧುಂಗೆ  ಸಾಧು , ಮಾಧುರ್ಯಂಗೆ ಮಾದುರ್ಯಂ  ಭಾದಿಪ್ಪ ಕಾಲಿಗೆ ವಿಪರೇತನಲ್ತೆ  ಕರ್ನಾಟಕಂ " ಈ ಉಕ್ತಿ ಇರುವುದು ಕಪ್ಪೆ ಆರ್ಯಭಟನ ಶಾಸನದಲ್ಲಿ . 
೦೪. ಹರ್ಮನ್ ಫ್ರೆಡ್ರಿಕ್ ಮೋಗ್ಲಿಂಗ್ - ಜರ್ಮನಿ ದೇಶದವನು -" ಮಂಗಳೂರು ಸಮಾಚಾರ"  ಪತ್ರಿಕೆ ಪ್ರಾರಂಭಿಸಿದ - ಇದು  ಕನ್ನಡದ ಮೊದಲ ಪತ್ರಿಕೆ -   ಈತ ಬಾಸೆಲ್ ಮಿಶನ್ ಸಂಸ್ಥೆಯ ಪ್ರತಿನಿಧಿ  ಭಾರತಕ್ಕೆ ಬಂದ -  ೧೮೪೮ ರಲ್ಲಿ " ಜೈಮಿನಿ ಭಾರತ " ಪ್ರಕಟಣೆ . 

೦೫ " A GRAMMAR OF KANNADA LANGUAGE "    ಈ  ಕೃತಿಯ  ಲೇಖಕ  ವಿಲಿಯಂ ಕೇರಿ  -  ಇದು ಆಧುನಿಕ ಕನ್ನಡದ ಮೊದಲ ಕೃತಿ - ೧೮೧೭  ರಲ್ಲಿ   ಕಲ್ಕತ್ತಾ ಬಳಿ   ಸಹರಾನ್ ಪುರ ಮುದ್ರಣಾಲಯ ದಲ್ಲಿ ಆಚ್ಚು ಹಾಕಿಸಲಾಯಿತು . 

೦೬.  "ದಿ ಡಿಕ್ಷನರಿ " ಕೃತಿ ಬರೆದವರು  ರೆವರೆಂಡ್ ಕಿಟಲ್ - ೧೮೯೪ ರಲ್ಲಿ . 


Monday, July 9, 2012

ಬೆಂದಕಾಳೂರಿನ ಭೊಂಬಾಟ್ ಕೋಟೆ

ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅವದಿಯಲ್ಲಿ ಬೆಂಗಳೂರಿನ ಹೃದಯ ಬಾಗದಲ್ಲಿ ಮಣ್ಣಿನ ಕೋಟೆಯನ್ನು ನಿರ್ಮಿಸಿದರು, ಕ್ರಿ.ಶ. ೧೭೬೧ರಲ್ಲಿ ಹೈದರ್-ಅಲಿ ಇದರ ಜೀರ್ಣೋದ್ಧಾರ ಮಾಡಿ ಕಲ್ಲಿನ ಕೋಟೆಯನ್ನಾಗಿ ಪರಿವರ್ತಿಸಿದರು.



ಬ್ರಿಟೀಷ್-ಈಸ್ಟ್-ಇಂಡಿಯ-ಕಂಪನಿಯ ಪ್ರತಿನಿಧಿಯಾದ ಲಾರ್ಡ್-ಕಾರ್ನ್-ವಾಲೀಸ್, ೨೧-ಮಾರ್ಚ್-೧೭೯೧ರಂದು ಟಿಪ್ಪು ಸುಲ್ತಾನನಿಂದ ವಶಕ್ಕೆ ಪಡೆಯುತ್ತಾನೆ, ಅದು ಮೂರನೇ ಮೈಸೂರು ಯುದ್ದದ ಸಮಯ (೧೭೯೦-೧೭೯೨).



ಈಗ ಈ ಕೋಟೆಯೂ ಸಂಪೂರ್ಣವಾಗಿ ನಾಶವಾಗಿದ್ದು ದೆಹಲಿಯ ಹೆಬ್ಬಾಗಿಲು ಮಾತ್ರ ಉಳಿದಿದೆ.



ಬೆಂದಕಾಳೂರಿನ ಭೊಂಬಾಟ್ ಕೋಟೆ ಈಗ ಬರಿ ನೆನಪು. ಆ ನೆನಪಿನ ಚಿತ್ರಗಳು ಮುಂದಿನ ಜನಾಂಗಕ್ಕೆ ಕೇವಲ ಕಥೆಗಳಾಗದಿರಲಿ. ಅದಕ್ಕಾಗಿಯೆ ನಮ್ಮ ಹೆಮ್ಮೆಯ ಕರುನಾಡ ಸ್ಮಾರಕಗಳನ್ನು ರಕ್ಷಿಸುವ ಹೋಣೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ನಮ್ಮ ನಮ್ಮ ಊರು-ಕೇರಿಗಳಲ್ಲಿ ಈ ಕೆಲಸ ಪ್ರಾರಂಭವಾಗಬೇಕು.




ಕೆಂಪೇಗೌಡರ ಕನಸಿನ ಕೋಟೆಯನ್ನ ಒಮ್ಮೆ ಸುತ್ತು ಹಾಕಿ ಬರೊಣ.

೧) ಬೆಂಗಳೂರು ಕೋಟೆಯ ಹೆಬ್ಬಾಗಿಲು
 


೨) ಬೆಂಗಳೂರು ಕೋಟೆಯ ದೆಹಲಿ ಹೆಬ್ಬಾಗಿಲು



೩) ಕ್ರಿ.ಶ. ೧೮೬೦ ರಲ್ಲಿ ನಿಕೊಲಸ್-ಬ್ರೋಸ್ ಎನ್ನುವ ಬ್ರಿಟೀಷ್ ವ್ಯೆಕ್ತಿ (ಭಾವ ಚಿತ್ರ) ಕಂಡ ಬೆಂಗಳೂರು ಕೋಟೆ.



೪) ಬೆಂಗಳೂರು ಕೋಟೆಯ ಈಗಿನ ಒಳಾಂಗಣ


೫) ಬೆಂಗಳೂರು ಕೋಟೆಯಲ್ಲಿನ ಗಣಪತಿ ದೇವಾಲಯ



೬) ಬೆಂಗಳೂರು ಕೋಟೆಯ ದೆಹಲಿ ಹೆಬ್ಬಾಗಿಲು (ಈಗಿನ ಚಿತ್ರಣ)






ಹೆಚ್ಛಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

http://en.wikipedia.org/wiki/Bangalore_Fort



 






Monday, September 13, 2010

ಪ್ರಮುಖ ನದಿಗಳು

೦೧. ಅರ್ಕಾವತಿ - ನಂದಿದುರ್ಗ (ಬೆಂಗಳೂರು )
೦೨. ಹೇಮಾವತಿ - ಮಂಡ್ಯದ ಮಾವಿನಕೆರೆ ಬಳಿ
೦೩. ಮಲಪ್ರಭಾ - ಮಲಕಾಪುರ ಬಳಿ
೦೪. ಕೃಷ್ಣ - ಮಹಾಬಲೇಶ್ವರ
೦೫. ಕಾವೇರಿ - ತಲಕಾವೇರಿ (ಕೊಡಗು ಜಿಲ್ಲೆ )
೦೬. ತುಂಗಭದ್ರಾ- ಶಿವಮೊಗ ಜಿಲ್ಲೆ
೦೭. ಭೀಮ - ಭೀಮ ಶಂಕರ
೦೮. ಕಭಿನಿ - ಉತ್ತರ ಮೈನಾಡು (ಟಿ . ನರಸಿಪುರ ಹತ್ತಿರ )

ಜ್ಞಾನ ಪ್ರಶಸ್ತಿ ವಿಜೇತರು

ಪ್ರಶಸ್ತಿ ವಿಜೇತ ಕನ್ನಡಿಗರು, ಕೃತಿಯ ಹೆಸರು ಮತ್ತು ಪಡೆದ ವರ್ಷ


೦೧. ಕೆ.ವಿ.ಪುಟ್ಟಪ್ಪ - ರಾಮಾಯಣ ದರ್ಶನಂ - ೧೯೬೭
೦೨. ದ. ರಾ. ಬೇಂದ್ರೆ- ನಾಕುತಂತಿ - ೧೯೭೩
೦೩. ಡಾ.ಕೆ.ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು - ೧೯೭೭
೦೪. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಚಿಕ್ಕವೀರ ರಾಜೇಂದ್ರ - ೧೯೮೩
೦೫. ಡಾ.ವಿನಾಯಕ ಕೃಷ್ಣ ಗೋಕಾಕ್ - ಸಮಗ್ರ ಸಾಹಿತ್ಯ - ೧೯೯೦
೦೬. ಡಾ.ಯು. ಆರ್. ಅನಂತ ಮೂರ್ತಿ - ಸಮಗ್ರ ಸಾಹಿತ್ಯ - ೧೯೯೪
೦೭. ಗಿರೀಶ್ ಕಾರ್ನಾಡ್ - ಸಮಗ್ರ ಸಾಹಿತ್ಯ - ೧೯೯೮

ಪ್ರಮುಖ ಜಲಪಾತಗಳು

೦೧. ಊಂಚಳ್ಲಿ - ಅಘನಾಶಿನಿ ನದಿ
೦೨. ಗೋಕಾಕ್ - ಘಟಪ್ರಭಾ ನದಿ
೦೩. ಛಾಯ ಭಗವತಿ - ದೋಣಿ ನದಿ
೦೪. ಚುಂಚನಕಟ್ಟೆ - ಕಾವೇರಿ ನದಿ
೦೫. ಜೋಗ (ಗೇರುಸೊಪ್ಪೆ ) - ಶರಾವತಿ
೦೬. ಹೊಗೆನಕಲ್ - ಕಾವೇರಿ
೦೭. ಭಂಡಾಜೆ - ನೇತ್ರಾವತಿ
೦೮. ಶಿಂಷಾ - ಶಿಂಷಾ
೦೯. ಮಾಗೋಡು - ಬೇಡ್ತಿ (ಗಂಗಾವಳಿ )
೧೦. ಶಿವನಸಮುದ್ರ - ಕಾವೇರಿ

ರಾಜ್ಯಪಾಲರುಗಳು

  1. ಶ್ರೀ. ಜಯಚಾಮರಾಜೇಂದ್ರ ಒಡೆಯರ್
  2. ಶ್ರೀ.ಎಂ.ಎಸ್. ಶ್ರೀಗಣೇಶ್
  3. ಶ್ರೀ. ವಿ. ವಿ. ಗಿರಿ
  4. ಶ್ರೀ. ಜಿ. ಎಸ್. ಪಾಟಕ್
  5. ಶ್ರೀ.ಧರ್ಮವೀರ
  6. ಶ್ರೀ.ಮೋಹನಲಾಲ್ ಸುಖಾಡಿಯಾ
  7. ಶ್ರೀ.ಉಮಾಶಂಕರ್ ದೀಕ್ಷಿತ್
  8. ಶ್ರೀ.ಗೋವಿಂದ ನಾರಾಯಣ್
  9. ಶ್ರೀ.ಅಶೋಕನಾಥ್ ಬ್ಯಾನರ್ಜಿ
  10. ಶ್ರೀ. ಪಿ. ವೆಂಕಟ್ ಸುಬ್ಬಯ್ಯ
  11. ಶ್ರೀ.ಬಾನು ಪ್ರಾತಪ್ ಸಿಂಗ್
  12. ಶ್ರೀ.ಖುರ್ಷದ್ ಅಲಂ ಖಾನ್
  13. ಶ್ರೀಮತಿ. ವಿ. ಎಸ್. ರಮಾದೇವಿ
  14. ಶ್ರೀ.ತಿ. ಏನ್.ಚತುರ್ವೇದಿ
  15. ಶ್ರೀ.ಭಾರದ್ವಾಜ್

ರಾಜ್ಯವಾಳಿದ ಮುಖ್ಯ ಮಂತ್ರಿಗಳು

೦೧. ಶ್ರೀ. ಕೆ.ಸಿ. ರೆಡ್ಡಿ
೦೨. ಶ್ರೀ.ಕೆಂಗಲ್ ಹನುಮಂತಯ
೦೩. ಕಡಿದಾಳ್ ಮಂಜಪ್ಪ
೦೪. ಎಸ್.ನಿಜಲಿಂಗಪ್ಪ
೦೫. ಬಿ.ಡಿ. ಜತ್ತಿ
೦೬. ಎಸ್. ಆರ್. ಕಂಟಿ
೦೭. ಎಸ್. ನಿಜಲಿಂಗಪ್ಪ
೦೮. ವೀರೇಂದ್ರ ಪಾಟೀಲ್
೦೯. ಡಿ. ದೇವರಾಜ ಅರಸು
೧೦. ಆರ್.ಗುಂಡುರಾವ್
೧೧. ರಾಮಕೃಷ್ಣ ಹೆಗಡೆ
೧೨. ಎಸ್. ಆರ್. ಬ್ಹೊಮ್ಮಾಯಿ
೧೩. ವೀರೇಂದ್ರ ಪಾಟಿಲ್
೧೪. ಎಸ್. ಬಂಗಾರಪ್ಪ
೧೫. ವೀರಪ ಮೊಯ್ಲಿ
೧೬. ಹೆಚ್. ಡಿ. ದೇವೇಗೌಡ
೧೮. ಎಸ್. ಎಂ. ಕೃಷ್ಣ
೧೯. ಎಸ್. ಧರಂಸಿಂಗ್
೨೦. ಹೆಚ್. ಡಿ. ಕುಮಾರಸ್ವಾಮಿ
೨೧. ಬಿ. ಎಸ್. ಯಡಿಯೂರಪ್ಪ