" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "

" ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು "



Monday, February 2, 2015

ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಸ್ಥಳಗಳು

ಆತ್ಮೀಯ ಸ್ಪರ್ದಾರ್ಥಿಗಳೇ ,

"ದೇಶ ಸುತ್ತಿ ನೋಡು , ಕೋಶ ಓದಿ ನೋಡು " ಎಂಬ  ಮಾತು ಬಹಳ ಜನಜನಿತವಾಗಿದೆ .  ಅದೇ ರೀತಿ   ಸ್ಪರ್ದಾರ್ತಿ ಗಳಾಗಿ, ಜ್ನಾನಾರ್ಥಿ ಗಳಾಗಿ, ಒಬ್ಬ ನಾಗರಿಕರಾಗಿ  ಕೆಲವು ಸ್ಥಳಗಳ ಮಾಹಿತಿ ನಮಗೆ ಇರಬೇಕಾಗುತ್ತದೆ . ಅದರಲ್ಲೂ ಐತಿಹಾಸಿಕ  ಪ್ರಾಮುಖ್ಯತೆಯುಳ್ಳ ಸ್ಥಳಗಳ ಅರಿವು ಮುಖ್ಯ . ಆ ಸ್ಥಳಗಳ ಹಿಂದೆ ದೊಡ್ಡ ಮಾಹಿತಿ ಗಳು   ಅಡಗಿರುತ್ತವೆ .  ಅವುಗಳನ್ನು  ಕಲಿಕೆಯ ಮೂಲಕ ಅರಿಯುವ ಪ್ರಯತ್ನ ಮಾಡೋಣ .

೦೧. ಬೆಳಗಾವಿ :


  1. ೧೯೨೪ ರಲ್ಲಿ ಅಖಿಲ ಭಾರತ ಕಾಂಗ್ರೆಸ್ಸ್  ಸಮಾವೇಶ  ಇಲ್ಲಿ ನಡೆಯಿತು . 
  2. ಮಹಾತ್ಮ ಗಾಂಧೀಜಿ  ಅಧ್ಯಕ್ಷತೆ  ವಹಿಸಿದ್ದರು . 
  3. ಈ ಸಮಾವೇಶದಲ್ಲಿ " ಉದಯವಾಗಲಿ ಚೆಲುವ ಕನ್ನಡ ನಾಡು " ಹಾಡನ್ನು ಮೊದಲ ಭಾರಿಗೆ ಹಾಡಲಾಯಿತು . 
  4. ಈ ಗೀತೆಯನ್ನು ಬರೆದವರು " ಹುಯಿಲುಗೋಳ ನಾರಾಯಣರಾಯರು ".
  5. ಇಲ್ಲಿಯೇ " ಕರ್ನಾಟಕ ಏಕೀಕರಣ  ಸಮಾವೇಶವು " ನಡೆಯಿತು . 
  6. ಇದರ ಅಧ್ಯಕ್ಷತೆ ವಹಿಸಿದ್ದವರು " ಕಡಪ ರಾಘವೇಂದ್ರ ರಾಯರು ". 

ಹೀಗೆ ಒಂದು ಸ್ಥಳದೊಟ್ಟಿಗೆ ಹಲವಾರು ಸಾಮಾನ್ಯ ಜ್ಞಾನ ದ ಅಂಶಗಳು ತಳುಕು ಹಾಕಿಕೊಂಡಿರುತ್ತವೆ . ಇತಿಹಾಸದ ದೃಷ್ಟಿ ಯಿಂದ ಮಾತ್ರ ಈ ಸ್ಥಳದ ಬಗ್ಗೆ ತಿಳಿದಿದ್ದೆವೆ . ಇನ್ನು ಅಲ್ಲಿನ ವಿಶೇಷತೆಗಳು , ಅಲ್ಲಿರುವ ವಿಶೇಷ ವ್ಯಕ್ತಿ ಗಳು, ಸ್ಥಳಗಳು , ಘಟನೆಗಳು  ಇವೆಲ್ಲವುದರ ಬಗ್ಗೆಯೂ ತಿಳಿದುಕೊಂಡು ಟಿಪ್ಪಣಿ  ಮಾಡಿಕೊಂಡರೆ  ಸಂಪೂರ್ಣ ಚಿತ್ರಣ ಸಿಕ್ಕ ಹಾಗಾಗುತ್ತದೆ . 

No comments:

Post a Comment