ನೋಟ್ಸ್ /ಟಿಪ್ಪಣಿ ಮಾಡೋದು ಹೇಗೆ ?
ಡಿಯರ್ ಪ್ರೆಂಡ್ಸ್ , ಸ್ಪರ್ಧಾ ಲೋಕದಲ್ಲಿ ಪ್ರತಿಯೊಂದು ವಸ್ತು ವಿಷಯ ವನ್ನು ಸ್ಪರ್ದೆಯಿಂದಲೇ ನೋಡಬೇಕು. ಅದಕ್ಕಾಗಿಯೇ ನೀವು ಅಚ್ಚುಕಟ್ಟಾಗಿ , ಸಮಗ್ರಪೂರ್ಣ ಮಾಹಿತಿಯನ್ನು ಸಂಕ್ಷಿಪ್ತವಾಗಿ, ಪುನರಾವರ್ತಿಸಲು ಸಹಾಯಕವಾಗುವಂತೆ ,ನಿಮ್ಮದೇ ಆದ ಸ್ವಂತ ನೋಟ್ಸ್ ಅಥವಾ ಟಿಪ್ಪಣಿ ಮಾಡಬೇಕು. ಮಾರುಕಟ್ಟೆಯಲ್ಲಿ ವಿವಿಧ ಪರೀಕ್ಷೆಗಳಿಗೆ ಸಂಬಂದಿಸಿದಂತೆ ಹಲವಾರು ಪುಸ್ತಕಗಳು, ಮ್ಯಾಗಜಿನ್ ಗಳು, ಪತ್ರಿಕೆಗಳು, ಸಿದ್ದ ನೋಟ್ಸ್ ಗಳು ದೊರೆಯುತ್ತವೆ. ಅವೆಲ್ಲವನ್ನು ಅದ್ಯಯನ ,ಮಂಥನ ಮಾಡಬೇಕು ನಿಜ. ಆದರೆ ಅವನ್ನೇ ಅಲ್ಟಿಮೇಟ್ ಸಾಮಾಗ್ರಿಗಳನ್ನಾಗಿಸಿ ಕೊಳ್ಳಬಾರದು. ಅದಕ್ಕಾಗಿಯೇ ನಿಮ್ಮದೇ ಆದ ನೋಟ್ಸ್/ಟಿಪ್ಪಣಿ ಮಾಡಿಕೊಳ್ಳಬೇಕು. ಅದು ನಿಮಗೆ ಪರೀಕ್ಷಾ ಸಮಯದಲ್ಲಿ ಬಹಳ ಉಪಯುಕ್ತವಾಗುತ್ತದೆ. ಅದಕ್ಕೆ ಸಂಬಂದಿಸಿದಂತೆ ಕೆಲವು ಅಂಶಗಳನ್ನ ನಿಮ್ಮ ಮುಂದಿಡಲು ಬಯಸುತ್ತೇನೆ.
೦೧>
ಒಂದು ವಿಷಯದ ಬಗೆಗೆ ಸಿಗುವ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ. ಕೊನೆಗೆ ಆ ಎಲ್ಲಾ ಮಾಹಿತಿಗಳನ್ನು ಒಗ್ಗೂಡಿಸಿ ನಿಮ್ಮದೇ ರೀತಿಯಲ್ಲಿ ಒಂದು ಕಡೆ ಬರೆದಿಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಅದಕ್ಕೆ ಪೂರಕ ಮಾಹಿತಿ ಸಿಕ್ಕರೆ ಅದಕ್ಕೆ ಸೇರಿಸುತ್ತಾ ಹೋಗಿ. ಹಾಗಾಗಿ ಒಂದು ವಿಷಯದ ಸಂಪೂರ್ಣ ಮಾಹಿತಿ ಒಂದು ಕಡೆ ಸಿಗುವಂತಾಗುತ್ತದೆ.
೦೨>
ಬೇರೆ ಬೇರೆ ವಿಷಯಗಳಿಗೆ ಸಂಬಂದಿಸಿದ ಮಾಹಿತಿಗಳನ್ನು ಬೇರೆ ,ಬೇರೆ ಪುಸ್ತಕ ಅಥವಾ ಪ್ರತ್ಯೇಕ ಹಾಳೆಗಳಲ್ಲಿ ಬರೆದಿಟ್ಟುಕೊಳ್ಳಿ. ಇಲ್ಲಾ ವಿಷಯಗಳನ್ನು ಒಂದೇ ಕಡೆ ಸಂಗ್ರಹಿಸುತ್ತಾ ಹೋದರೆ ಗೊಂದಲ ಉಂಟಾಗುತ್ತದೆ.
ಉದಾಹರಣೆ: ಇತಿಹಾಸಕ್ಕೆ ಸಂಬಂದಿಸಿದ ಮಾಹಿತಿ ಅಂದುಕೊಂಡರೆ ಅದನ್ನು ಪ್ರತ್ಯೇಕ ಭಾಗಗಳನ್ನಾಗಿ ಮಾಡಿಕೊಳ್ಳಬೇಕು.
ವಿಶ್ವ ಇತಿಹಾಸ ,ಭಾರತದ ಇತಿಹಾಸ, ಕರ್ನಾಟಕದ ಇತಿಹಾಸ. ಭಾರತದ ಇತಿಹಾಸ ತೆಗೆದುಕೊಂಡರೆ, ಪ್ರಾಚೀನ ಇತಿಹಾಸ, ಮಧ್ಯಯುಗದ ಇತಿಹಾಸ, ಆಧುನಿಕ ಭಾರತದ ಇತಿಹಾಸ, ಸ್ವಾತಂತ್ರ ಸಂಗ್ರಾಮ ಹೀಗೆ.
೦೩>
ದಯವಿಟ್ಟು ನಕಲು /ಕ್ಸೆರಾಕ್ಸ್ ಸಂಸ್ಕೃತಿ ಗೆ ಮೊರೆ ಹೋಗಬೇಡಿ. ಬೇರೆ ಬೇರೆ ಕೋಚಿಂಗ್ ಸೆಂಟರ್ಗಳ ನೋಟ್ಸು , ಇಂಪಾರ್ಟೆಂಟ್ ನೋಟ್ಸ್ ಹಂಗೆ ಹಿಂಗೆ ಅನ್ಕೊಂಡು ಬರಿ ಕ್ಸೆರಾಕ್ಸ್ ಪ್ರತಿಗಳನ್ನು ನಿಮ್ಮ ಕಪಾಟಿನಲ್ಲಿ ಜೋಡಿಸುತ್ತಾ ಹೋಗಬೇಡಿ. ಮೊದಲೇ ಹೇಳಿದಂತೆ ಎಲ್ಲವನ್ನು ಓದಿ, ಆದರೆ ನಿಮ್ಮದೇ ಕೈ ಬರವಣಿಗೆಯ ಅಲ್ಟಿಮೇಟ್ ನೋಟ್ಸ್ ಮಾಡಿಕೊಳ್ಳಿ .
೦೪>
ಎಂತಹ ಉತ್ಕ್ರುಸ್ಟ ಮಟ್ಟದ ಮಾಹಿತಿ /ನೋಟ್ಸ್ ನಿಮಲ್ಲಿದ್ದರು ಕೂಡ ಅದನ್ನ ನಿಮಗನಿಸಿದ ರೀತಿಯಲ್ಲಿ ಬರೆದುಕೊಳ್ಳಿ. ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ನಿಮಗೆ ತಿಳಿದಿರುವ ಹಾಗೆ ನಿಗದಿತ ಸಾಲುಗಳಲ್ಲಿ ಕೆಲವು ಪ್ರಶ್ನೆ ಗಳಿಗೆ ಉತ್ತರಿಸಬೇಕಾಗುತ್ತದೆ. ಹಾಗಾಗಿ ಕೈನಲ್ಲಿ ಬರೆದು ಅಬ್ಯಾಸಿಸಿಕೊಳ್ಳಿ ಮತ್ತು ಇದು ನಿಮಗೆ ಹೆಚ್ಚು ನೆನಪು ಕೂಡ ಇರುತ್ತದೆ.
೦೫>
ನೋಟ್ಸ್ ಮಾಡುವಾಗ ಒಂದೇ ರೀತಿಯ ಶಾಯಿ/ಇನ್ಕ್ ನ್ನು ಬಳಸಬೇಡಿ. ಬೇರೆ ಬೇರೆ ಬಣ್ಣದ ಪೆನ್ನುಗಳನ್ನು ಬಳಸಿ. ಹೆಡ್ಡಿಂಗ್, ಸಬ್ ಹೆಡ್ಡಿಂಗ್, ಮುಖ್ಯವಾದ ಸ್ಥಳ , ವ್ಯಕ್ತಿ, ದಿನಾಂಕ, ಸಾಲುಗಳನ್ನು ಬೇರೆ ಬೇರೆ ಬಣ್ಣಗಳಲ್ಲಿ ಬರೆದುಕೊಂಡರೆ ಅದ್ಯಯನ ಮಾಡುವಾಗ ಬಹು ಬೇಗ ಅವನ್ನ ಗುರುತಿಸಬಹುದು. ಪುನರಾವರ್ತನೆಯ ಸಮಯದಲ್ಲಿ ಇದು ಹೆಚ್ಚು ಉಪಯುಕ್ತವಾಗುತ್ತದೆ.
೦೬>
ಪುಸ್ತಕಗಳಲ್ಲಿ ನೋಟ್ಸ್ ಮಾಡುವುದಕ್ಕಿಂದ ಉತ್ತಮ ಗುಣಮಟ್ಟದ ಹಾಳೆಗಳಲ್ಲಿ ನೋಟ್ಸ್ ಮಾಡುತ್ತಾ ಹೋದರೆ, ಪೂರಕ ಮಾಹಿತಿ ಸಿಕ್ಕಾಗ ಅದಕ್ಕೆ ಸೇರಿಸುತ್ತಾ ಹೋಗಬಹುದು.
೦೭>
ನೋಟ್ಸ್ ಓದುವಾಗ ನಿಮ್ಮ ಬಳಿ ಸದಾ ಬುಕ್ ಮಾರ್ಕರ್ ಗಳಿರಲಿ , ಮುಖ್ಯವಾದ ಮಾಹಿತಿಗಳನ್ನು ಮಾರ್ಕ್ ಮಾಡುತ್ತಾ ಹೋಗಿ.
೦೮>
ಒಂದು ಸ್ವಾರ್ಥದ ವಿಷಯ. ದಯವಿಟ್ಟು ನೀವು ಮಾಡಿಟ್ಟು ಕೊಂಡ ನೋಟ್ಸ್ ನ್ನು ಯಾರಿಗೂ ಕೊಡಬೇಡಿ. ಸ್ವಾರ್ಥಿಗಳಾಗಿ ಅನ್ನುವುದು ನಮ್ಮ ಉದ್ದೇಶ ಅಲ್ಲ. ಅದು ನಿಮ್ಮ ಶ್ರಮದ ಪ್ರತಿಫಲ. ಪುಕ್ಕಟ್ಟೆ ಯಾಗಿ ಬೇರೆಯವರಿಗೆ ಸಿಗುವುದು ಬೇಡ. ಅವರೂ ಶ್ರಮವಹಿಸಿ ಸಿದ್ದಮಾಡಿ ಕೊಳ್ಳಲಿ . ಬೇಕಾದರೆ ಪುಸ್ತಕಗಳೋ, ಮತ್ತಿನ್ನೆನಾದರು ಕೊಡಿ.
ಪ್ರೀತಿಯ ಬಂದುಗಳೇ ನಾವು ಹೇಗೇ ಬಟ್ಟೆಯ ಕಪಾಟಿನಲ್ಲಿ ನಮಗಿಸ್ಟವಾದ ಬಟ್ಟೆ ಗಳನ್ನೂ ಆಯ್ದು ಧರಿಸಿಕೊಳ್ಳುತ್ತೇವೆಯೋ ಹಾಗೆಯೇ ಅಗಾಧವಾದ ಮಾಹಿತಿ ಲೋಕದಲ್ಲಿ, ಅಗತ್ಯವಾದ, ಪ್ರಾಮುಖ್ಯವಾದ ಮಾಹಿತಿಗಳನ್ನು ಮಾತ್ರ ನಿಮ್ಮ ನೋಟ್ಸ್ ನಲ್ಲಿ ಬರೆದಿಟ್ಟುಕೊಳ್ಳಬೇಕು. ಆ ನೋಟ್ಸ್ ನಿಜಕ್ಕೂ ನಿಮ್ಮ ಸಾಧನೆಗೆ ಕೀಲಿಕೈ. ಮತ್ತೇಕೆ ತಡ ಇಂದಿನಿಂದಲೇ ಬರೆಯಲು ಪ್ರಾರಂಭಿಸಿ. ಯಶಸ್ಸಿನೆಡೆಗೆ ಸಾಗಿ . ವಿಶ್ ಯು ಗುಡ್ ಲುಕ್.
ನಿಮಗೆ ಗೊತ್ತಿರುವ ವಿಷಯಗಳನ್ನು, ಮಾಹಿತಿಗಳನ್ನು ನಮಗೆ ಕಳುಹಿಸಿ. ಜ್ಞಾನವನ್ನು ಪಸರಿಸೋಣ. ಸಮೃದ್ದಕರ್ನಾಟಕ ಕಟ್ಟೋಣ. ಇದರಲ್ಲಿ ನಮ್ಮ ಸ್ವಾರ್ಥ ಇಲ್ಲ. ಗ್ರಾಮೀಣ ಕನ್ನಡ ಸ್ಪರ್ಧಾರ್ತಿ ಗಳಿಗಾಗಿ ಈ ವೇದಿಕೆ ಸೃಷ್ಟಿಯಾಗಿದೆ . ಇದರಲ್ಲಿ ಪ್ರಕಟಿಸುವ ಮಾಹಿತಿಗಳನ್ನು ಯಾರು ಬೇಕಾದರೂ ಬಳಸಿಕೊಂಡು ನಿಮ್ಮ ಜ್ಞಾನ ಮಟ್ಟವನ್ನು ವೃದ್ಡಿಸಿಕೊಳ್ಳ ಬಹುದು. ಇದಕ್ಕೆ ಸಂಬಂದಿಸಿದಂತೆ ಈ ಮಾಹಿತಿಗಳನ್ನು ಬಳಸಿಕೊಳ್ಳಲು ಈ ಬ್ಲಾಗ್ ನಲ್ಲಿ ಯಾವುದೇ ನಿರ್ಭಂದ ವಿಧಿಸಿಲ್ಲ . ದಯವಿಟ್ಟು ಈ ಕನ್ನಡ ಬ್ಲಾಗ್ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೆ ತಿಳಿಸಿ. ನಿಮ್ಮ ಸಕಾರಾತ್ಮಕ ಪಾಲ್ಗೊಳ್ಳುವಿಕೆ ನಮಗೆ ಅತಿ ಮುಖ್ಯ .
ಶುಭ ಆಶಯಗಳೊಂದಿಗೆ ನಿಮ್ಮೊಲ್ಲೊಬ್ಬ ,
ಚುಕ್ಕಿ ಹುಣಸೂರು.
ಬಿಂದುವಿನಿಂದ ಅನಂತದೆಡೆಗೆ...
No comments:
Post a Comment